[ಇಲ್ಲಿರುವ ಯಾವುದೇ ಮಾಹಿತಿಯು ಸತ್ಯಕ್ಕೆ ದೂರ ಎನಿಸಿದಲ್ಲಿ ಕೆಳಗಿರುವ ಕಾಮೆಂಟ್ಸ್ ಬಾಕ್ಸ್ ನಲ್ಲಿ ಆಕ್ಷೇಪಣೆಗಳನ್ನು / ಅನಿಸಿಕೆಗಳನ್ನು / ಸಲಹೆಗಳನ್ನು ಸಲ್ಲಿಸಬಹುದು]
ಜನನ: 1916 (ಅಂದಾಜಿಸಲಾಗಿದೆ), ದೇವರಹಳ್ಳಿ ಗ್ರಾಮ.
ಮರಣ: 1980 (64 ವಯಸ್ಸು) (ಅಂದಾಜಿಸಲಾಗಿದೆ)
ತಂದೆ: ಪ್ರದ್ಯುಮ್ನ ಚಾರ್
ತಾಯಿ: ಅಕ್ಕಯಮ್ಮ
ವಿದ್ಯಾಭ್ಯಾಸ: 4ನೇ ತರಗತಿ, ತೊಂಡೇಭಾವಿ ಸರ್ಕಾರಿ ಶಾಲೆ
ವೃತ್ತಿ: ವ್ಯವಸಾಯ
ಕುಟುಂಬ:
ಪತ್ನಿ : ಕಮಲಮ್ಮ (ವಿವಾಹ: 1940)
ಮಕ್ಕಳು: ಜಯಮ್ಮ , ರಾಜಣ್ಣ , ಶ್ರೀರಂಗ ಚಾರ್ , ಆನಂದ ಚಾರ್ , ಪದ್ಮನಾಭ ಚಾರ್ , ಯಶೋದಮ್ಮ , ಕೃಷ್ಣಮೂರ್ತಿ , ಶ್ಯಾಮಲಮ್ಮ
ನಾರಾಯಣ ಸ್ವಾಮಿಯವರು ಪ್ರದ್ಯುಮ್ನ ಚಾರ್ ಮತ್ತು ಅಕ್ಕಯಮ್ಮ ದಂಪತಿಗಳಿಗೆ ಎರಡನೇ ಮಗನಾಗಿ 1916ರಲ್ಲಿ ಜನಿಸಿದರೆಂದು ಅಂದಾಜಿಸಲಾಗಿದೆ. ಅವರ ಒಡಹುಟ್ಟಿದವರು ಅಣ್ಣ ಲಕ್ಷಿ ನರಸಿಂಹ ಚಾರ್, ತಮ್ಮ ಚಕ್ರಪಾಣಿ ಚಾರ್ ಹಾಗೂ ತಂಗಿ ಜಯಲಕ್ಷಮ್ಮನವರು ಇಂದಿಗೆ ಜೀವಂತವಾಗಿಲ್ಲ. 1940ರಲ್ಲಿ ಕಮಲಮ್ಮನವರೊಂದಿಗೆ ವಿವಾಹವಾಗಿ 8 ಜನ ಮಕ್ಕಳಿಗೆ ಜನ್ಮ ನೀಡಿದ್ದರು. ಆಗಿನ ಕಾಲದಲ್ಲಿ ಸರ್ವೇ ಸಾಮಾನ್ಯವಾದ ಬಡತನದ ಬೇಗೆ ಇವರಿಗೂ ತಟ್ಟಿತ್ತು.
ನಾರಾಯಣ ಸ್ವಾಮಿಯವರ ಯಾವುದೇ ಬಾವಚಿತ್ರ ಇದುವರೆವಿಗೂ ದೊರೆತಿಲ್ಲ. ಅಂದಾಜು ಆರು ಅಡಿ ಎತ್ತರ ಸಪೂರ ಮೈಕಟ್ಟು, ತಲೆಯಲ್ಲಿ ಅರ್ಚಕರಿಗಿರಬೇಕಾದ ಜುಟ್ಟು, ಕೋಲು ಮುಖ, ಕಂದು ಮೈಬಣ್ಣ ಹೊಂದಿದ್ದು ಯಾವಾಗಲೂ ಬಿಳಿ ಪಂಚೆ ಧರಿಸುತ್ತಿದ್ದರು.
ನಾರಾಯಣ ಸ್ವಾಮಿಯವರು 4ನೇ ತರಗತಿಗೆ ವಿಸ್ಯಾಭ್ಯಾಸ ಮುಗಿಸಿ ದೇವರಹಳ್ಳಿ ಬೆಟ್ಟದ ಮೇಲಿನ ಶ್ರೀ ರಂಗನಾಥ ಸ್ವಾಮಿಯ ಅರ್ಚಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಜೀವನೋಪಾಯಕ್ಕೆ ವ್ಯವಸಾಯವನ್ನು ಅವಲಂಬಿಸಿದ್ದರು. ಇವರು ಕನ್ನಡ ಹಾಗು ತೆಲುಗು ಬಾಷೆ ಬಲ್ಲವರಾಗಿದ್ದರು.
ನಾರಾಯಣಸ್ವಾಮಿಯವರಿಗೆ ರಾಮಾಯಣ ಮಹಾಭಾರತದಂತ ಧಾರ್ಮಿಕ ಗ್ರಂಥಗಳನ್ನು ಓದುವ ಹವ್ಯಾಸದ ಜೊತೆಗೆ ಕೇಳಿಕೆಗಳು ಎಂಬ ನಾಟಕ ಪ್ರಕಾರದಲ್ಲಿ ವಿಶೇಷ ಆಸಕ್ತಿಯಿದ್ದು ಕಲಾವಿದರಾಗಿ ಅಭಿನಯಿಸುತ್ತಿದ್ದರು. ಸುತ್ತಮುತ್ತಮುತ್ತಲ ಗ್ರಾಮಗಳಲ್ಲಿ ಬಹಳ ಪ್ರತಿಷ್ಠೆಯಿಂದ ಬದುಕಿದ್ದ ಇವರು ನ್ಯಾಯ ತೀರ್ಮಾನಗಳಲ್ಲಿ ಬಾಗವಹಿಸಿ ಉತ್ತಮ ಹೆಸರು ಹಾಗು ಸ್ನೇಹಿತರನ್ನು ಸಂಪಾದಿಸಿದ್ದರು. ಸುಗುಣಶೀಲರಾದ ನಾರಾಯಣ ಸ್ವಾಮಿಯವರು ಎಂದಿಗೂ ಹಣ ಆಸ್ತಿ ಮಾಡುವ ಉದ್ದೇಶದಿಂದ ಬದುಕಿದವರಾಗಿರಲಿಲ್ಲ. ರಾಜಕೀಯವಾಗಿಯೂ ಸಕ್ರಿಯವಾಗಿದ್ದ ಶ್ರೀಯುತರು ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಬಾಗವಹಿಸುತ್ತಿದ್ದರು.
ಸುಮಾರು 1980ರ ಆಗಸ್ಟ್ ತಿಂಗಳಿನಲ್ಲಿ ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದ ನಾರಾಯಣ ಸ್ವಾಮಿಯವರು ದೊಡ್ಡ ಮಗಳಾದ ಜಯಮ್ಮನವರ ವಿವಾಹ ಮಾಡಿದ್ದರು. ಇವರ ಕಾಲಾನಂತರ ದೊಡ್ಡ ಮಗನಾದ ರಾಜಣ್ಣನವರು ಸಂಸಾರದ ಜವಾಬ್ದಾರಿಗಳನ್ನು ಹೊತ್ತರು.
ನಾರಾಯಣ ಸ್ವಾಮಿ (ಕಿರು ಪರಿಚಯ)
Reviewed by RK
on
November 13, 2021
Rating:
ವೆರಿ ಗುಡ್ ಸೂಪರ್ ತುಂಬಾ ಚೆನ್ನಾಗಿದೆ
ReplyDelete