ದೇವರಹಳ್ಳಿ ಬೆಟ್ಟದ ಶ್ರೀ ರಂಗನಾಥಸ್ವಾಮಿಯ ಪೂಜಾ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ - 2021
ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕು, ತೊಂಡೇಭಾವಿ ಹೋಬಳಿಯ ದೇವರಹಳ್ಳಿ ಗ್ರಾಮದ ಬೆಟ್ಟದ ಮೇಲಿನ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ದಿನಾಂಕ 28.11.2021 ರಂದು ಹಮ್ಮಿಕೊಂಡಿದ್ದ ಪೂಜೆ ಹಾಗೂ ನಾರಾಯಣ ಸ್ವಾಮಿ ಹಾಗೂ ಕಮಲಮ್ಮನವರ ಸ್ಮರಣಾರ್ಥವಾಗಿ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ದೇವಸ್ಥಾನದ ಮೂಲಸೌಕರ್ಯ:
ದೇವರಹಳ್ಳಿ ಶ್ರೀ ರಂಗನಾಥ ಸ್ವಾಮಿ ಬೆಟ್ಟವು, ದೇವರಹಳ್ಳಿ-ಮಿಂಡೇನಹಳ್ಳಿ ರಸ್ತೆಯಿಂದ ಬಲ ತಿರುವು ಪಡೆದು ಸುಮಾರು 2 ಕಿಲೋ ಮೀಟರ್ ನಷ್ಟು ಬೆಟ್ಟದ ಮೇಲಿನ ರಸ್ತೆಯಲ್ಲಿ ಹಾದು ವಾಹನಗಳು ಅಥವಾ ಕಾಲನಡಿಗೆಯಲ್ಲಿ ಬೆಟ್ಟದ ತುದಿಯಲ್ಲಿನ ದೇವಸ್ಥಾನ ತಲುಪಬಹುದಾಗಿದೆ. ರಸ್ತೆಯು ಹಲವು ಕಡೆ ಕಡಿದಾಗಿರುವ ಕಾರಣ ಹಾಗೂ ಇನ್ನೂ ಮಳೆಯಿಂದ ನೀರಿನ ಹರಿವಿನಿಂದ ಕೊರತೆಗಳುಂಟಾಗಿರುವ ಕಾರಣ ಜಾಗರೂಕತೆಯ ವಾಹನ ಚಾಲನೆ ಅತ್ಯವಶ್ಯಕ. ಬೆಟ್ಟದ ಮೇಲೆ ಕೆಲವು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ತಂಗುದಾಣದಲ್ಲಿ ಸುಮಾರು 50 ಜನ ಆಶ್ರಯ ಪಡೆಯಬಹುದಾಗಿದ್ದು ನೀರು ಹಾಗೂ ವಿದ್ಯುತ್ ಸೌಕರ್ಯ ಸದಾಕಾಲ ಇರುತ್ತದೆ. ದೇವಸ್ಥಾನದ ಜೇರ್ಣೋದ್ದಾರ ಕಾರ್ಯ, ಶೌಚಾಲಯ ವ್ಯವಸ್ಥೆ, ಟಾರು ರಸ್ತೆ ಹಾಗೂ ಕಲ್ಲು ಮೆಟ್ಟಿಲು ವ್ಯವಸ್ಥೆ ಇನ್ನು ಒಂದೆರಡು ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ.
| ಬೈಕ್ ಹತ್ತಿಸಲು ಹರಸಾಹಸ ಪಡುತ್ತಿರುವ ಬೆಂಗಳೂರಿನ ಬೈಕರ್ ಗಳು |
ಪೂಜೆ ಹಾಗೂ ಅನ್ನ ಸಂತರ್ಪಣೆ:
| ಶ್ರೀ ರಂಗನಾಥ ಸ್ವಾಮಿಯ ಅಲಂಕಾರ |
| ಕುಟುಂಬದ ಹಿರಿಯರು |
| ಒಟ್ಟು ಕಾರ್ಯಕ್ರಮಕ್ಕೆ ಕಳೆ ತಂದ ಮಕ್ಕಳ ಮುದ್ದು ಕಲರವ |
| ಆದ್ಯಾವ್ದು ಅಂತಾ ಜೋಕ್? ನಮಗೂ ಹೇಳ್ತೀರಾ ಪ್ಲೀಸ್,,, 🙂 |
| ನಮ್ಮ ಕುಟುಂಬ - ನಮ್ಮ ಹೆಮ್ಮೆ |
| ಪರಮಾತ್ಮನ ಸಾನಿಧ್ಯದಲ್ಲಿ - ಸಕತ್ ರುಚಿ |
| ಇರುಳಿನಲ್ಲಿ ಜಗಮಗಿಸಿದ ಶ್ರೀ ರಂಗನಾಥ ಸ್ವಾಮಿ ದೇವಾಲಯ |